ಇಂಗ್ಲಿಷ್ ಕಲಿಕೆ ಬೆರಳ ತುದಿಯಲ್ಲಿ! –ಬೇದ್ರೆ ಮಂಜುನಾಥ Mon, 11/18/2013 - 01:00 ಇಂಗ್ಲಿಷ್ ಭಾಷೆ ಮಾತನಾಡಲು ಮತ್ತು ಬರೆಯುವುದನ್ನು ಕಲಿಯಲು ಖಾಸಗಿ ತರಗತಿಗಳಿಗೇ ಸೇರಬೇಕೆಂದೇನೂ ಇಲ್ಲ. ಮನಸ್ಸು ಮಾಡಿದರೆ, ನಾವು ದಿನನಿತ್ಯ ಬಳಸುವ ಮೊಬೈಲ್, ಟಿ.ವಿ., ಇಂಟರ್‌ನೆಟ್‌ಗಳ ಮೂಲಕವೇ ಸ್ವಂತ ‘ಲ್ಯಾಂಗ್ವೇಜ್ ಲ್ಯಾಬ್’ ರಚಿಸಿಕೊಂಡು ಭಾಷೆಯನ್ನು ಸಿದ್ಧಿಸಿಕೊಳ್ಳಬಹುದು. ಸಾವಿರಾರು ರೂಪಾಯಿ ಶುಲ್ಕ ಕೊಟ್ಟು ‘ಸ್ಪೋಕನ್ ಇಂಗ್ಲಿಷ್’ ತರಗತಿಗಳಿಗೆ ಸೇರಿ, ಇಂಗ್ಲಿಷ್ ಕಾನ್‌ವರ್ಸೇಷನ್, ಸ್ಪೋಕನ್ ಇಂಗ್ಲಿಷ್, ಇಂಗ್ಲಿಷ್ ಸ್ಪೀಕಿಂಗ್, ಕಾನ್‌ವರ್ಸೇಷನಲ್ ಇಂಗ್ಲಿಷ್, ಸಾಫ್ಟ್‌ಸ್ಕಿಲ್ ಟ್ರೈನಿಂಗ್ ಎಂದೆಲ್ಲ ಉಠಾಬೈಸ್ ತೆಗೆಯುತ್ತಿರುವ ಕನ್ನಡದ ಇಂಗ್ಲಿಷ್ ಪ್ರೇಮಿಗಳಿಗೆ, ತಮ್ಮ ಬೆರಳ ತುದಿಯಲ್ಲೇ ಇಂಗ್ಲಿಷ್ ಕಲಿಕೆಯ ಸಾಧನಗಳಿವೆ ಎಂಬುದು ಅರಿವಿಗೇ ಬರುತ್ತಿಲ್ಲ! ತಮ್ಮ ಕಿಸೆಯಲ್ಲೇ ಇರುವ ಮೊಬೈಲ್ ಫೋನ್, ಮನೆಯಲ್ಲಿರುವ ರೇಡಿಯೊ, ಟಿ.ವಿ., ಡಿ.ವಿ.ಡಿ., ಎಂಪಿತ್ರೀ ಪ್ಲೇಯರ್, ಕಂಪ್ಯೂಟರ್, ಇಂಟರ್ನೆಟ್ಗಳನ್ನೇ ಬಳಸಿ ಸ್ವಂತ ‘ಲ್ಯಾಂಗ್ವೇಜ್ ಲ್ಯಾಬ್’ ಮಾಡಿಕೊಂಡು, ಇಂಗ್ಲಿಷ್ ಕಲಿಯಲು ಅವರು ಯಾಕೆ ಮನಸ್ಸು ಮಾಡುತ್ತಿಲ್ಲವೋ ಆ ದೇವರೇ ಬಲ್ಲ. ಹಲೊ ‘ಟಾಕಿಂಗ್ ಟಾಮ್’! ...